Navikotsava 2016 announced

ನಾವಿಕೋತ್ಸವ ೨೦೧೬ – ನಾವಿಕ ಕನ್ನಡ ಉತ್ಸವ ಜುಲೈ ೧೬-೧೭ ೨೦೧೬ ರಂದು ರವೀಂದ್ರ ಕಲಾಕ್ಷೇತ್ರ ಬೆಂಗಳೂರಿನಲ್ಲಿ ವಿಶ್ವದೆಲ್ಲಡೆಯ ಕನ್ನಡಿಗರೊಂದಿಗೆ ಅತ್ಯಂತ ವೈಭವತೆಯಿಂದ ನೆರವೇರಿಸಲು ನಾವಿಕ ಕಾರ್ಯಕಾರಿ ಸಮಿತಿ ನಿರ್ಧರಿಸಿದೆ. ಕಾರ್ಯಕ್ರಮದ ಸಕಲ ಸಿದ್ಧತೆ ಸಮರೋಪಾದಿಯಲ್ಲಿ ಸಾಗಿದೆ.

ಈ ಭವ್ಯ ವಿಶ್ವ ಕನ್ನಡ ಉತ್ಸವಕ್ಕೆ ಸರ್ವರಿಗೂ ಸುಸ್ವಾಗತ

ಬೆಂಗಳೂರು ಮಹಾನಗರದಲ್ಲಿ ನಡೆಯುಲಿರುವ ನಾವಿಕೋತ್ಸವ ೨೦೧೬ ವಿಶ್ವ ಕನ್ನಡ ಉತ್ಸವಕ್ಕೆ , ಸಾಂಸ್ಕೃತಿಕ ಕಲಾ ತಂಡವು ನಿಮ್ಮೆಲ್ಲರನ್ನೂ ಆಹ್ವಾನಿಸುತ್ತದೆ. ಈ ಸಮಾರಂಭವನ್ನು ನಾವಿಕ ಮತ್ತು ಕರ್ನಾಟಕ ಸರ್ಕಾರ – ಕನ್ನಡ  ಮತ್ತು ಸಂಸ್ಕೃತಿ ನಿರ್ದೇಶನಾಲಯ  ಜೊತೆಗೂಡಿ ಆಚರಿಸುತ್ತಿರುವುದು ಒಂದು ಸುಯೋಗ. ಈ ಸಮಾವೇಶದಲ್ಲಿ ತಾವು ಸಕ್ರಿಯವಾಗಿ ಭಾಗವಹಿಸಿ, ಕರ್ನಾಟಕದ ಶ್ರೀಮಂತ ಹಿರಿಮೆಯನ್ನು ಮುಗಿಲು ಮುಟ್ಟಿಸಲು ತಾವೆಲ್ಲಾ ಒಂದಾಗಿ ಬನ್ನಿ. ಕರ್ನಾಟಕದ ಪರಂಪರಾಗತ ಸಂಪದ್ಭರಿತ ಕಲೆ, ಸಾಹಿತ್ಯ, ಸಂಸ್ಕೃತಿ ಮೊದಲಾದುವುಗಳನ್ನು ಪ್ರಪಂಚದಾದ್ಯಂತ ಹಬ್ಬಿ,ಹರಡುವುದೇ ನಾವಿಕೋತ್ಸವ ೨೦೧೬ ರ  ಉದ್ದೇಶ. ಇದಕ್ಕಾಗಿ ನಿಮ್ಮೆಲ್ಲರ ಸಹಕಾರ ಅತ್ಯಗತ್ಯ .ಇದನ್ನು ಸಾಧಿಸಲು ನಾವಿಕ ಕೆಲವು ನಿಯಮಗಳನ್ನು ಅಳವಡಿಸಿದೆ. ಈ ಸಡಗರದ ಜಾತ್ರೆಯಲ್ಲಿ ಭಾಗವಹಿಸಲು ನಿಮ್ಮನ್ನು ನೊಂದಾಯಿಸಿಕೊಳ್ಳಿ.

NAVIKOTSAVA 2016 cultural team is honored and excited to welcome you all to NAVIKOTSAVA 2016 Summit in Bengaluru, Karnataka. This summit is brought to you in association with Department of Kannada and Culture, Govt. of Karnakata. We invite your active participation in celebrating the unique and rich Kannada culture and tradition. Please register and take the opportunity to be part of the grand festivities

You may also like...

Leave a Reply

Your email address will not be published. Required fields are marked *