ಜರ್ಮನಿಯ ಫ್ರಾಂಕ್ನರ್ಟ್‌ನಲ್ಲಿ ನಾವಿಕೋತ್ಸವ-2024 ವಿಶ್ವ ಕನ್ನಡ ಸಮ್ಮೇಳನ
| ಬೆಂಕಿ ಬಸಣ್ಣ ನ್ಯೂಯಾರ್ಕ್
7ನೇ ನಾವಿಕೋತ್ಸವ ವಿಶ್ವ ಕನ್ನಡ ಸಮ್ಮೇಳನವು ಜುಲೈ 16ರಂದು ಜರ್ಮನಿಯ ಫ್ರಾಂಕ್ಷರ್ಟ್‌ನಲ್ಲಿ ರೈನ್ ಮೈನ್ ಕನ್ನಡ ಸಂಘದ ಸಹಯೋಗದೊಂದಿಗೆ ಆಯೋಜಿಸಲಾಗುತ್ತಿದೆ. ಇದರ ಜೊತೆಗೆ ಹನ್ನೊಂದು ದಿನಗಳ ಯೂರೋಪ್ ಟೂರ್ ಪ್ಯಾಕೇಜ್ ಅನ್ನು ಜೂನ್ 26 ರಿಂದ ಜುಲೈ 07ರವರೆಗೆ ಆಯೋಜಿಸಲಾಗಿದೆ.
ಈ ನಾವಿಕೋತ್ಸವ ವಿಶ್ವ ಕನ್ನಡ ಸಮ್ಮೇಳನದಲ್ಲಿ ಸಂಗೀತ, ನಾಟಕ, ನೃತ್ಯ, ಗಾಯನ, ಶೈಕ್ಷಣಿಕ ವೇದಿಕ, ಔದ್ಯಮಿಕ ವೇದಿಕೆ, ಕವಿ ಸಮ್ಮೇಳನ, ಕನ್ನಡ-ಕಲಿ ಹೀಗೆ ಹಲವಾರು ಕಾರ್ಯಕ್ರಮಗಳು ನಡೆಯಲಿವೆ ಎಂದು ನಾವಿಕ ಸಂಸ್ಥೆಯ ಅಧ್ಯಕ್ಷರಾದ ಶಿವಕುಮಾರ್ ಪುಕಟಿಸಿದ್ದಾರೆ.
ಯುರೋಪಿನಲ್ಲಿ ಪ್ರಪ್ರಥಮ ಬಾರಿಗೆ ನಡೆಯುತ್ತಿರುವ ಈ ನಾವಿಕೋತ್ಸವ ವಿಶ್ವ ಕನ್ನಡ ಸಮ್ಮೇಳನವನ್ನು ನಾವಿಕ ಸಂಸ್ಥೆಯೊಂದಿಗೆ ಜಂಟಿಯಾಗಿ ಆಯೋಜಿಸಲು ಜರ್ಮನಿಯ ಕನ್ನಡಿಗರು ಅತ್ಯಂತ ಉತ್ಸಾಹದಿಂದ ಎದುರು ನೋಡುತ್ತಿದ್ದಾರೆ ಎಂದು ರನ್ ಮೈನ್ ಕನ್ನಡ ಸಂಘದ ನಾಯಕರಾದ ವೇದ ಕುಮಾರಸ್ವಾಮಿಯವರು ತಿಳಿಸಿದ್ದಾರೆ.
ನಾವಿಕ ಸಂಸ್ಥೆಯು ಬೆಸ ವರ್ಷಗಳಲ್ಲಿ ಅಮೆರಿಕದಲ್ಲಿಯೂ ಮತ್ತು ಸಮ ವರ್ಷಗಳಲ್ಲಿ ಅಮೆರಿಕದ ಹೊರಗಡ ಸಮ್ಮೇಳನಗಳನ್ನು ನಡೆಸುತ್ತಾ ಬಂದಿದೆ. 2022ರಲ್ಲಿ ಆಫ್ರಿಕಾ ಖಂಡದ ಕೀನ್ಯಾ ದೇಶದ ನೈರೋಬಿಯಲ್ಲಿ ನಾವಿಕೋತ್ಸವ ಸಮ್ಮೇಳನವನ್ನು ತುಂಬಾ ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಈ ವರ್ಷ ಜರ್ಮನಿಯಲ್ಲಿ ಆಯೋಜಿಸಲಾಗುತ್ತಿದೆ.
ಕನ್ನಡ ಮ್ಯಾಟ್ರಿಮೊನಿಯಲ್ಲಿ ಪರಿಪೂರ್ಣ ಸಂಗಾತಿ ಹುಡುಕಿಕೊಳ್ಳಿ – ನೋಂದಣಿ ಉಚಿತ!
ವಿಶ್ವ ಕನ್ನಡಿಗರ ಕಲೆ, ಸಂಸ್ಕೃತಿ, ಭಾಷಾ ಪ್ರೇಮದ ಜೊತೆಯಲ್ಲೇ ಆರೋಗ್ಯ ಭಾಗ್ಯಕ್ಕೂ ‘ನಾವಿಕ’ ಟಿಪ್ಸ್..!
Click the below link for more details:
https://www.facebook.com/VijayKarnataka/posts/4332869873440046
ಪ್ರತಿಭಾ ಪ್ರದರ್ಶನದ ವೇದಿಕೆ, ಆರನೇ ವಿಶ್ವ ನಾವಿಕ ಸಮಾವೇಶ; ಅದಕ್ಕೂ ಮುನ್ನ ನಡೆಯಲಿದೆ ಪೂರ್ವಭಾವಿ ಸ್ಪರ್ಧೆ
Please click on the below link for more details: