Navikotsava 2018 @ Mysore
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಾವಿಕೋತ್ಸವ – 2018
ನಮ್ಮ ಕನ್ನಡ ನಾಡನ್ನು ಬಿಟ್ಟು ಉದರ ನಿಮಿತ್ತ ನಾವು ಬೇರೆ ಬೇರೆ ದೇಶಗಳಲ್ಲಿ/ಪ್ರದೇಶಗಳಲ್ಲಿ ಬದುಕು ಕಟ್ಟಿಕೊಂಡಿದ್ದೇವೆ. ಬೇರೆ ಭಾಷೆಯನ್ನು ಕಲಿತು, ಬೇರೆ ಜನರೊಂದಿಗೆ ಬಾಳಿದ್ದೇವೆ. ಆದರೆ ಕನ್ನಡವನ್ನು ಮರೆಯಲು ಸಾಧ್ಯವೇ? ಯಾವುದಾದರು ಒಂದು ನೆಪ ಹುಡುಕಿಕೊಂಡು ಸೇರುತ್ತಲೆ ಇರುತ್ತೇವೆ. ಹಬ್ಬ ಆಚರಿಸುತ್ತೇವೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತೇವೆ, ಕನ್ನಡ ಕಲಾವಿದರನ್ನ – ಸಾಹಿತಿಗಳನ್ನು ಗೌರವಿಸುತ್ತೇವೆ. ಒಟ್ಟಿನಲ್ಲಿ ಕನ್ನಡತನವನ್ನು ಸಂಭ್ರಮಿಸುತ್ತೇವೆ.
ಇಂತಹ ಸಂಭ್ರಮಿಸುವ ಸುಯೋಗ ಈಗ ಮತ್ತೊಮ್ಮೆ ಬಂದಿದೆ. ಅಮೆರಿಕಾದಲ್ಲಿ ನೆಲೆಸಿರುವ ಕನ್ನಡಿಗರೆಲ್ಲ ಸೇರಿ ನಾವಿಕ ಎಂಬ ಸಂಸ್ಥೆಯನ್ನು ಕಟ್ಟಿಕೊಂಡು ಯಶಸ್ವಿ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸುವ ವಿಷಯ ನಿಮಗೆ ಗೊತ್ತಿರುವ ಸಂಗತಿಯೇ. ಈ ವರ್ಷ ನಾವಿಕ ಸಂಸ್ಥೆ ನಮ್ಮ ವಿಶ್ವಕನ್ನಡೋತ್ಸವ – ೨೦೧೮ ಅಂದರೆ “ನಾವಿಕೋತ್ಸವ 2018” ಎಂಬ ಎರಡು ದಿನದ ಸಾಂಸ್ಕೃತಿಕ ಕಾರ್ಯಕ್ರಮದ ಆಯೋಜನೆಯನ್ನು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆಗಸ್ಟ್ ೨ ನೇ ವಾರದಲ್ಲಿ ಹಮ್ಮಿಕೊಳ್ಳಬೇಕೆಂದುಕೊಂಡಿದ್ದೇವೆ. ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಅನಿವಾಸಿ ಭಾರತೀಯ ಸಮಿತಿ ಮತ್ತು ಕನ್ನಡ ಪ್ರಾಧಿಕಾರದ ಸಹಯೋಗದಿಂದ ಆಯೋಜಿಸಲ್ಪಡುವ ಈ ಹಬ್ಬದಲ್ಲಿ ಜಗತ್ತಿನಾದ್ಯಂತ ನೆಲೆಸಿರುವ ಎಲ್ಲ ಕನ್ನಡಿಗರು ಭಾಗವಹಿಸಬೇಕು ಎಂಬುದು ನಾವಿಕದ ಆಶಯವಾಗಿದೆ. ಈ ಬಾರಿಯ “ನಾವಿಕೋತ್ಸವ ೨೦೧೮” ಅಮೆರಿಕನ್ನಡೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಕಲೆ, ಸಾಹಿತ್ಯ ಗೋಷ್ಠಿಗಳು, ವಿಚಾರ ಸಂಕೀರ್ಣಗಳು, ಸಂವಾದ, ಚರ್ಚೆ ಮತ್ತು ಮಾತುಕತೆಗಳಿಗೆ ವೇದಿಕೆ ಕಲ್ಪಿಸಿಕೊಡವ ಸಿದ್ಧತೆಯಲಿದ್ದೇವೆ.
ನಾವಿಕೋತ್ಸವ 2018 ಈ ಉತ್ಸವದಲ್ಲಿ ತಮ್ಮ ದೇಶದ ಕನ್ನಡ ಸಂಘ/ ಸಂಸ್ಥೆ/ ಕೂಟದ ಪ್ರಮುಖ ವ್ಯ್ಸಕ್ತಿಯಾಗಿ ತಾವು ಭಾಗವಹಿಸಬೇಕು ಮತ್ತು ತಮ್ಮ ಸಂಸ್ಥೆಯ ವತಿಯಿಂದ ಒಂದು ಸುಂದರವಾದ ಸಾಂಸ್ಕೃತಿಕ ಪ್ರಸ್ತುತಿಯನ್ನು ನೀಡಬೇಕು. ಭಾಗವಹಿಸುವ ಎಲ್ಲ ಕನ್ನಡ ಕಲಾವಿದರಿಗೆ – ಸಂಸ್ಥೆಯ ಪದಾಧಿಕಾರಿಗಳಿಗೆ ಆಯೋಜಕರಿಂದ ಪ್ರಮಾಣ ಪತ್ರ, ನೆನಪಿನ ಕಾಣಿಕೆ ಹಾಗೂ ಯೋಗ್ಯ ಗೌರವವನ್ನು ನೀಡಲಾಗುವುದು . ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ. ಭಾಗವಹಿಸಲು communication@navika.org ಗೆ ನಿಮ್ಮ ಇಮೇಲ್ ಕಳುಹಿಸಿ. ಹಾಗು ನೀವು ಮೈಸೂರಿನವರಾಗಿದ್ದು (NRI) ಮತ್ತು ಸ್ವಯಂ ಸೇವೆಗೆ ಇಚ್ಚಿಸಿದ್ದಲ್ಲಿ ನಮಗೆ ಇಮೇಲ್ ಮೂಲಕ ತಿಳುಹಿಸಿ.
ಈ ಉತ್ಸವದಲ್ಲಿ ಭಾಗವಹಿಸುವ ಎಲ್ಲ ಕನ್ನಡಿಗರಿಗೆ ಆಯೋಜಕರು ವೇದಿಕೆಯಲ್ಲಿ ಅವಕಾಶವನ್ನು ಮಾತ್ರ ಕಲ್ಪಿಸುತ್ತಾರೆ. ಪ್ರವಾಸ ಹಾಗೂ ಊಟಪಚಾರದ ಖರ್ಚನ್ನು ಭಾಗವಹಿಸುವವರೇ ಭರಿಸಬೇಕು. ತಾವು ಮತ್ತು ತಮ್ಮ ದೇಶ/ಪ್ರದೇಶದಲ್ಲಿರುವ ಕನ್ನಡ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಆಗ್ರಹದ ಆಹ್ವಾನ ನೀಡುತ್ತಿದ್ದೇವೆ.
ಧನ್ಯವಾದಗಳೊಂದಿಗೆ,
ಸುರೇಶ ರಾಮಚಂದ್ರ
ಅಧ್ಯಕ್ಷರು, ನಾವಿಕ
Dear friends,
NAVIKA is planning to host a 1-2 day event in Mysore City in the first or second week of August. One of the objectives of this event is to provide a platform for NRI children a forum to showcase their talents in Karnataka. This event will be fourth such event organized by NAVIKA. Many of you may be planning to go to India this summer. Please let us know if you are interested to participate in this event and showcase your talents. Let us know if it is a dance, drama, singing etc. Also let us know if you are from Mysore, and would be interested in in volunteering for this event. Your response is greatly appreciated. Please email your response on or before March 15th to communication@navika.org . Thank you for your attention.
Thanks and Regards
Sri. Suresh Ramachandra
President, Navika.